ಮಾರ್ಚ್ ೧೧ ಮಾರ್ಚ್ ತಿಂಗಳ ೧೧ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೭೦ನೇ ದಿನ (ಅಧಿಕ ವರ್ಷದಲ್ಲಿ ೭೧ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೯೫ ದಿನಗಳು ಉಳಿದಿರುತ್ತವೆ. ಟೆಂಪ್ಲೇಟು:ಮಾರ್ಚ್ ೨೦೨೪ == ಪ್ರಮುಖ ಘಟನೆಗಳು == ೧೭೦೨ - ಆಂಗ್ಲ ಭಾಷೆಯ ಮೊದಲ ದಿನಪತ್ರಿಕೆಯಾದ ದ ಡೈಲಿ ಕುರಾಂಟ್ ಲಂಡನ್ ನಗರದಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು. ೧೯೮೫ - ಮಿಖಾಯಿಲ್ ಗೊರ್ಬಚೇವ್ ಸೋವಿಯೆಟ್ ಒಕ್ಕೂಟದ ನಾಯಕರಾದರು. ೧೯೮೩ - ಪಾಕಿಸ್ಥಾನ್ ಬೈಜಿಕ ಬಾಂಬ್ ಕೊಲ್ದ್ ಟೆಸ್ಟ್ ಮಾಡುತ್ತದೆ. ೧೯೯೯ - ಇನ್ಫೋಸಿಸ್ ನಾಸ್ಡಾಕ್ನಲ್ಲಿ ವಿನಿಮಯಕ್ಕೆ ಪಟ್ಟಿಯಾದ ಮೊದಲ ಭಾರತೀಯ ಸಂಸ್ಥೆಯಾಯಿತು. ೨೦೦೪ - ಮ್ಯಾಡ್ರಿಡ್ ನಗರದಲ್ಲಿ ಅನೇಕ ಉಗಿಬಂಡಿಗಳಲ್ಲಿ ಉಂಟಾದ ಬಾಂಬ್ ಸ್ಫೋಟಗಳಲ್ಲಿ ೧೯೨ ಜನರ ಸಾವು. ೨೦೦೬ - ಮಿಷೆಲ್ ಬಾಕಲೆಟ್, ಚಿಲಿ ದೇಶದ ಮೊದಲ ಮಹಿಳಾ ರಾಷ್ಟ್ರಾಧ್ಯಕ್ಷರಾದರು. ೨೦೧೧ - ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ಮಾರ್ಚ್ ೧೧, ೧೨, ಮತ್ತು ೧೩ ರಂದು ಜರುಗಿತು. ಉದ್ಭಾಟನೆಯನ್ನು 'ಇನ್ಫೋಸಿಸ್ ನ ಪ್ರವರ್ತಕ', 'ಎನ್. ನಾರಾಯಣ ಮೂರ್ತಿ'ಯವರು ಮಾಡಿದರು. == ಜನನ == ೧೫೪೪ - ತೊರ್ಕಾತೊ ತಸ್ಸೊ, ಇಟಲಿಯ ಕವಿ. ೧೯೧೫ - ವಿಜಯ್ ಹಜಾರೆ, ಭಾರತದ ಕ್ರಿಕೆಟ್ ಪಟು. == ಮರಣ == ೨೦೦೬ - ಸ್ಲೊಬೊದಾನ್ ಮಿಲೊಸೇವಿಚ್, ಸೆರ್ಬಿಯ ಮತ್ತು ಯುಗೊಸ್ಲಾವಿಯಗಳ ರಾಷ್ಟ್ರಪತಿ. == ರಜೆಗಳು/ಆಚರಣೆಗಳು == ಯುವರ ದಿನ (ಜ಼ಾಂಬಿಯ) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ